ನಮ್ಮ ಬಗ್ಗೆ
ರೈತರಿಗೆ ಒಕ್ಕೂಟವಾದ ಏಕೀಕೃತ ವೇದಿಕೆ
ನಮ್ಮ ಪರಿಚಯ
ನಮ್ಮ ಬಗ್ಗೆ ಶೃಂಗೇರಿ ಕ್ಷೇತ್ರ ರೈತ ಒಕ್ಕೂಟವು ಶೃಂಗೇರಿ ಕ್ಷೇತ್ರದ ರೈತರ ಹಕ್ಕು, ಭೂಮಿ, ಜೀವನೋಪಾಯ ಮತ್ತು ಗೌರವಯುತ ಬದುಕಿನ ರಕ್ಷಣೆಗೆ ಸ್ಥಾಪನೆಯಾದ ಸಮರ್ಪಿತ ರೈತ ಸಂಘಟನೆ. ಸರ್ಕಾರದ ವಿವಿಧ ನೀತಿ–ನಿಯಮಗಳು, ಅಭಿವೃದ್ಧಿ ಯೋಜನೆಗಳು ಹಾಗೂ ಕಾನೂನು ಪ್ರಕ್ರಿಯೆಗಳ ಕಾರಣದಿಂದ ಸಂಕಷ್ಟದಲ್ಲಿರುವ ರೈತರ ಪರವಾಗಿ ಒಗ್ಗಟ್ಟಿನ ಧ್ವನಿಯಾಗಿ ನಿಲ್ಲುವುದು ನಮ್ಮ ಮೂಲ ಉದ್ದೇಶವಾಗಿದೆ. ನೀರಾವರಿ ಉದ್ದೇಶಕ್ಕಾಗಿ ಭದ್ರಾ ಅಣೆಕಟ್ಟು ನಿರ್ಮಾಣದ ಸಂದರ್ಭದಲ್ಲಿ ತಮ್ಮ ನೆಲೆ ಮತ್ತು ಜಮೀನನ್ನು ತ್ಯಜಿಸಿದ ಭದ್ರಾ ಸಂತ್ರಸ್ಥರು, ಹಲವು ದಶಕಗಳಿಂದ ಪರ್ಯಾಯ ಜಮೀನಿಗಾಗಿ ಮತ್ತು ನ್ಯಾಯಸಮ್ಮತ ಪರಿಹಾರಕ್ಕಾಗಿ ಹೋರಾಟ ನಡೆಸುತ್ತಿದ್ದು, ಅವರ ಈ ನ್ಯಾಯದ ಹೋರಾಟಕ್ಕೆ ಬೆನ್ನೆಲುಬಾಗಿ ನಿಂತಿರುವುದು ನಮ್ಮ ಒಕ್ಕೂಟದ ಪ್ರಮುಖ ಕಾರ್ಯವಾಗಿದೆ. ಸಂತ್ರಸ್ಥರಿಗೆ ಸರ್ಕಾರದೊಂದಿಗೆ ಸಂವಾದ ನಡೆಸುವಲ್ಲಿ, ಕಾನೂನು ಮಾರ್ಗದರ್ಶನ ನೀಡುವಲ್ಲಿ ಹಾಗೂ ಸಂಘಟಿತ ಹೋರಾಟ ರೂಪಿಸುವಲ್ಲಿ ಒಕ್ಕೂಟ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಇಂದಿನ ದಿನಗಳಲ್ಲಿ ಸರ್ಕಾರದ ಒಂದಷ್ಟು ಕಾನೂನು ಕಟ್ಟಳೆಗಳಿಂದ ತಮ್ಮ ನೆಲೆಯಲ್ಲೇ ನೆಲೆನಿಂತಿರುವ ಜಮೀನನ್ನು ಕಳೆದುಕೊಳ್ಳುವ ಭೀತಿಯಲ್ಲಿ ಅನೇಕ ರೈತರು ಬದುಕುತ್ತಿದ್ದಾರೆ. ಇಂತಹ ರೈತರಿಗೆ ಕಾನೂನು ಅರಿವು ಮೂಡಿಸುವುದು, ತಜ್ಞರಿಂದ ಉಚಿತ ಸಲಹೆ ಒದಗಿಸುವುದು ಹಾಗೂ ಅಗತ್ಯವಿದ್ದಲ್ಲಿ ನ್ಯಾಯಾಲಯಗಳಲ್ಲಿ ಉಚಿತ ವಕಾಲತ್ತು ಸೇವೆ ಕಲ್ಪಿಸುವುದು ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಮಹತ್ವದ ಸೇವೆಯಾಗಿದೆ. ಶೃಂಗೇರಿ ಕ್ಷೇತ್ರದ ರೈತರ ಜೀವನಾಧಾರವಾಗಿರುವ ಅಡಿಕೆ ಬೆಳೆ ಇಂದು ಹಲವು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದೆ. ಹಳದಿ ರೋಗ, ಚುಕ್ಕೆ ರೋಗ ಸೇರಿದಂತೆ ವಿವಿಧ ರೋಗಗಳಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಮಸ್ಯೆಗಳ ಬಗ್ಗೆ ರೈತರಿಗೆ ವೈಜ್ಞಾನಿಕ ಮಾಹಿತಿ ನೀಡುವುದು, ಕೃಷಿ ವಿಜ್ಞಾನಿಗಳು ಹಾಗೂ ತಜ್ಞರೊಂದಿಗೆ ಸಭೆಗಳು ಮತ್ತು ಕ್ಷೇತ್ರ ಭೇಟಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ರೋಗಗಳನ್ನು ಹತೋಟಿಗೆ ತರುವ ಪ್ರಯತ್ನಗಳನ್ನು ಒಕ್ಕೂಟ ಮಾಡುತ್ತಿದೆ.
ವಿಷನ್ ಮತ್ತು ಮಿಷನ್
ರೈತನ ಹಕ್ಕಿಗೆ ಒಗ್ಗಟ್ಟಿನ ಹೋರಾಟ
ರೈತರ ಹಕ್ಕುಗಳ ರಕ್ಷಣೆಗೆ ಒಗ್ಗಟ್ಟಿನ ಹೋರಾಟ ನಡೆಸುವ, ಭೂಮಿ ಹಾಗೂ ಜೀವನೋಪಾಯ ಸಂಬಂಧಿತ ಸಮಸ್ಯೆಗಳಿಗೆ ಕಾನೂನು ಮತ್ತು ತಜ್ಞರ ಸಹಕಾರ ಒದಗಿಸುವ, ಅಡಿಕೆ ಸೇರಿದಂತೆ ಪ್ರಮುಖ ಬೆಳೆಗಳ ಸಮಸ್ಯೆಗಳಿಗೆ ವೈಜ್ಞಾನಿಕ ಪರಿಹಾರ ಕಂಡುಕೊಳ್ಳುವ ಹಾಗೂ ತಂತ್ರಜ್ಞಾನ ಆಧಾರಿತ ಸೇವೆಗಳ ಮೂಲಕ ರೈತನ ಬದುಕಿಗೆ ನಿರಂತರ ಬೆಂಬಲ ನೀಡುವ ಶಕ್ತಿಶಾಲಿ ರೈತ ಸಂಘಟನೆಯಾಗಿ ರೂಪುಗೊಳ್ಳುವುದು.
ಹಕ್ಕುಗಳ ರಕ್ಷಣೆ, ವೈಜ್ಞಾನಿಕ ಪರಿಹಾರ, ತಂತ್ರಜ್ಞಾನಾಧಾರಿತ ರೈತ ಬದುಕು
ರೈತರ ಹಕ್ಕುಗಳ ರಕ್ಷಣೆಗೆ ಒಗ್ಗಟ್ಟಿನ ಹೋರಾಟ ನಡೆಸುವುದು, ಭೂಮಿ ಹಾಗೂ ಜೀವನೋಪಾಯ ಸಂಬಂಧಿತ ಸಮಸ್ಯೆಗಳಿಗೆ ಕಾನೂನು ಮತ್ತು ತಜ್ಞರ ಸಹಕಾರ ಒದಗಿಸುವುದು, ಅಡಿಕೆ ಸೇರಿದಂತೆ ಪ್ರಮುಖ ಬೆಳೆಗಳ ಸಮಸ್ಯೆಗಳಿಗೆ ವೈಜ್ಞಾನಿಕ ಪರಿಹಾರ ಹುಡುಕುವುದು ಮತ್ತು ತಂತ್ರಜ್ಞಾನ ಆಧಾರಿತ ಸೇವೆಗಳ ಮೂಲಕ ರೈತನ ಬದುಕಿಗೆ ಬೆಂಬಲ ನೀಡುವುದು.
ನಿರ್ವಹಣಾ ಮಂಡಳಿ
ನಮ್ಮ ನಾಯಕತ್ವ
ವಿಶ್ವನಾಥ್ ಗದ್ದೆಮನೆ
“ವಿಶ್ವನಾಥ್ ಗದ್ದೆಮನೆ” – ಅಧ್ಯಕ್ಷರು, ಶೃಂಗೇರಿ ಕ್ಷೇತ್ರ ರೈತ ಒಕ್ಕೂಟವಿಶ್ವನಾಥ್ ಗದ್ದೆಮನೆ ಅವರು ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ, ರೈತ ಸಮುದಾಯದ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರಾಮಾಣಿಕವಾಗಿ ಹೋರಾಡುವ ಮುಖಂಡರಾಗಿದ್ದಾರೆ.ಅವರು ಶೃಂಗೇರಿ ಕ್ಷೇತ್ರದ ರೈತರ ಅ...
ರಾಮಸ್ವಾಮಿ ಶೆಟ್ಟಿಗದ್ದೆ
ರಾಮಸ್ವಾಮಿ ಶೆಟ್ಟಿಗದ್ದೆ, ಗೌರವಾಧ್ಯಕ್ಷಶೃಂಗೇರಿ ಕ್ಷೇತ್ರ ರೈತ ಒಕ್ಕೂಟರಾಮಸ್ವಾಮಿ ಶೆಟ್ಟಿಗದ್ದೆ ಅವರು ಶೃಂಗೇರಿ ಕ್ಷೇತ್ರ ರೈತ ಒಕ್ಕೂಟದ ಗೌರವಾಧ್ಯಕ್ಷರಾಗಿರುವ ಸಮರ್ಪಿತ ನಾಯಕನಾಗಿ ರೈತ ಹಿತ ಮತ್ತು ಮನವಿ‑ಹೋರಾಟದ ಕಾರ್ಯಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ. ಅವರು ಕ್ಷೇತ್ರದ ರೈತರು ಎದುರಿಸುತ್ತಿರುವ ವಿ...
BECOME A PART OF CHANGE IN AGRICULTURE
Want to Be Part of the Farmer Movement?
Let's work together to bring your ideas to life.